ಈ ವಾರ ತೆರೆಗೆ `ಆಪ್ತರಕ್ಷಕ`
Posted date: 18/February/2010

ಸಾಹಸಸಿಂಹ ಡಾ:ವಿಷ್ಣುವರ್ಧನ್ ಅಭಿನಯದ ೨೦೦ನೇ ಚಿತ್ರ ‘ಆಪ್ತರಕ್ಷಕ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಿಷ್ಣುವರ್ಧನ್ ನಟನೆಯ ದ್ವಿಶತಕದ ಚಿತ್ರ ಅವರು ವಿದಿವಶರಾದ ನಂತರ ಬಿಡುಗಡೆಯಾಗುತ್ತಿರುವುದು ವಿಷಾದನೀಯ.
ಉದಯರವಿ ಫ಼ಿಲಂಸ್ ಲಾಂಚನದಲ್ಲಿ ಕೆ.ಕೃಷ್ಣಪ್ರಜ್ವಲ್ ನಿರ್ಮಿಸಿರುವ ಈ ಚಿತ್ರವನ್ನು ‘ಆಪ್ತಮಿತ್ರ ಖ್ಯಾತಿಯ ಪಿ.ವಾಸು ನಿರ್ದೇಶಿಸಿದ್ದಾರೆ. ಪಿ.ಕೆ.ಎಚ್ ದಾಸ್ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ, ವಿ.ಆರ್.ಭಾಸ್ಕರ್ ಸಂಭಾಷಣೆ, ಗುರುಕಿರಣ್ ಸಂಗೀತ ಹಾಗೂ ರಾಂಶೆಟ್ಟಿ ರವರ ಸಾಹಸ ಸಂಯೋಜನೆಯಿರುವ ಚಿತ್ರದ ತಾರಾಬಳಗದಲ್ಲಿ ಡಾ:ವಿಷ್ಣುವರ್ಧನ್, ಸಂಧ್ಯಾ, ಭಾವನ, ಲಕ್ಷ್ಮೀಗೋಪಾಲಸ್ವಾಮಿ, ವಿಮಲರಾಮನ್, ಅವಿನಾಶ್, ಶ್ರೀನಿವಾಸಮೂರ್ತಿ, ವಿನಯಾಪ್ರಸಾದ್, ರಮೇಶ್‌ಭಟ್, ರವಿಚೇತನ್, ವಿನಿತ, ಮನದೀಪ್‌ರಾಯ್, ರಾಮಮೂರ್ತಿ, ಲಲಿತಾ, ಸಿಂಧು, ಮಾಲತಿಸರ್‌ದೇಶಪಾಂಡೆ, ರವೀಂದ್ರ, ರಾಜೇಶ್, ಬ್ರಹ್ಮಾವರ್, ಸುಚಿತ್ರಾ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed